Wednesday, March 15, 2006

ದೀನಗಿಂತ ದೇವ ಬಡವ

I really love this Kannada poem by Dinakara Desai. I had read this long ago when I was young. I recently came across this and typed it in Baraha.

ದೀನಗಿಂತ ದೇವ ಬಡವ - ದಿನಕರ ದೇಸಾಯಿ

ಹರಿಗೆ ಎಂದು ಗುಡಿಯನೊಂದ ಕಟ್ಟುತಿರುವೆಯಾ ?
ಹರಿಯ ಒಲುಮೆ ಪಡೆದು ಪುಣ್ಯ ಗಳಿಸುತಿರುವೆಯಾ ?

ಹುಚ್ಚ ! ನೀನು ಹಳ್ಳಿಗೋಡು
ದೀನ ಜನರ ಪಾಡ ನೊಡು

ಇರಲು ಗುಡಿಯು ಇಲ್ಲವಲ್ಲ
ಹೊಟ್ಟೆ ತುಂಬ ಅನ್ನವಿಲ್ಲ !

ಹರಿಗೆ ಎಂದು ಗುಡಿಯನೊಂದ ಕಟ್ಟುತಿರುವೆಯಾ ?

ದೀನಗೊಂದು ಗೂಡು ಸಾಕು
ದೇವಗೊಂದು ವಿಶ್ವ ಬೇಕು
ಮಣ್ಣ ಹುಲ್ಲ ಸಣ್ಣ ಗೂಡು

ಬಡವಗದುವೆ ಸಿರಿಯ ಬೀಡು

ಹರಿಗೆ ಎಂದು ಗುಡಿಯನೊಂದ ಕಟ್ಟುತಿರುವೆಯಾ ?

ಜಗಕೆ ಗೋಡೆ ಹಾಕಿ ಗುಡಿಯ ಕಟ್ಟಬಲ್ಲೆಯಾ ?
ಹರಿಗೆ ಎಂದು ಗುಡಿಯನೊಂದ ಕಟ್ಟುತಿರುವೆಯಾ ?
ಹರಿಯ ವಿಶ್ವರೂಪವನ್ನು ಮರೆತುಬಿಟ್ಟೆಯಾ ?
ದೀನಗಿಂತ ದೇವ ಬಡವನೆಂದು ಬಗೆದೆಯಾ ?


If you can't see the Kannada font above, you can see an image of the poem below.

3 comments:

Shruthi said...

Beautiful!! Really beautiful!! Thanks for the poem :)

Unknown said...

My pleaseure.

santosh said...

ತುಂಬಾ ಚೆನ್ನಾಗಿದೆ ದಿನಕರ ದೇಸಾಯಿಯವರ ಚುಟುಕಗಳನ್ನು ಅಂತರ್ಜಾಲದಲ್ಲಿ ಹುಡುಕುತ್ತಿದ್ದಾಗ ನಿಮ್ಮ ಈ ಪುಟ ಸಿಕ್ಕಿತು ಕವಿತೆ ತುಂಬಾ ಖುಷಿ ಕೊಟ್ಟಿತು ನಿಮ್ಮ ಈ ಪ್ರಯತ್ನಕ್ಕೆ ನನ್ನ ಹ್ರುತ್ಪೂರ್ವಕ ಅಭಿನಂದನೆಗಳು

ಸಂತೋಷ